ಕಾಲಭೈರವ ದೇವಸ್ಥಾನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು, ಉತ್ಸವಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮೊಂದಿಗೆ ಸೇರಿ.
Loading image...
ಶ್ರೀ ಕಾಲಭೈರವ ಸ್ವಾಮಿ ಪಂಚಲೋಹ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ವಿಶೇಷ ಪೂಜೆಗಳು, ಹೋಮ ಹವನಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ದಡದಹಳ್ಳಿ ಗ್ರಾಮದಲ್ಲಿ 'ಪ್ರಾರ್ಥನೆ ಕಡೆಗೆ' ಎಂಬ ವಿಶೇಷ ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು, ಇದು ಆಧ್ಯಾತ್ಮಿಕ ಪ್ರಭೋದನೆ ಹಾಗೂ ಭಕ್ತರ ಒಗ್ಗೂಡಿಸುವ ಕಾರ್ಯಕ್ರಮವಾಗಿದೆ.
ಮಹಾ ಶಿವರಾತ್ರಿ ಪ್ರಯುಕ್ತ ಶ್ರೀ ಕಾಲಭೈರವ ದೇವಾಲಯದಲ್ಲಿ ವಿಶೇಷ ಪೂಜೆ, ಜಾಗರಣೆ, ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಅಮಾವಾಸ್ಯೆಯಂದು ಶ್ರೀ ಕಾಲಭೈರವ ದೇವಾಲಯದಲ್ಲಿ ವಿಶೇಷ ಪೂಜೆ, ಪಿತೃ ಶಾಂತಿ ಹೋಮ ಮತ್ತು ಭಾಗ್ಯಸೂಕ್ತ ಪಾರಾಯಣ ನಡೆಯಲಿದೆ.
ಶ್ರೀ ಕಾಲಭೈರವ ಸ್ವಾಮಿಯ ಮಂಡಲ ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು.
ಶ್ರೀ ಕಾಲಭೈರವ ಸ್ವಾಮಿಯ ಹಾಗೂ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯ ಕೃಪಾಶೀರ್ವಾದದೊಂದಿಗೆ ಶ್ರೀ ಕಾಲಭೈರವ ಬಳಗ ಟ್ರಸ್ಟ್ ವತಿಯಿಂದ ನಮ್ಮ ನಡಿಗೆ ಆರೋಗ್ಯ ದೆಡೆಗೆ ಎಂಬ ಸಂಕಲ್ಪದೊಂದಿಗೆ ಚಾಮುಂಡಿಬೆಟ್ಟಕ್ಕೆ ಪಾದಯಾತ್ರೆ! ಮಾಡಲಾಯಿತು