ಶ್ರೀ ಕಾಲಭೈರವ ಬಳಗ ಟ್ರಸ್ಟ್ (ರಿ)
ನಂ 3532, 7ನೇ ಸಿ. ಮುಖ್ಯ ರಸ್ತೆ, ಜಿ. ಬ್ಲಾಕ್, 4ನೇ ಅಡ್ಡ ರಸ್ತೆ ಕನಕದಾಸನಗರ, ದಟ್ಟಗಳ್ಳಿ, 3ನೇ ಹಂತ ಮೈಸೂರು 570022
ವಾರಾಣಸ್ಯಾಂ ಭೈರವೋ ದೇವಃ ಸಂಸಾರಭಯನಾಶನಃ |
ಬಹುಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||
ಪ್ರಾರ್ಥನೆ ಕಡೆಗೆ
"ಓಂ ನಮಃ ಶಿವಾಯ"ಮತ್ತು"ಓಂ ಶ್ರೀ ಕಾಲಭೈರವಾಯ ನಮಃ"ಎಂಬ
ನಾಮ ಮಂತ್ರವನ್ನು ಪ್ರತಿ ಸೋಮವಾರದಂದು
ಸಂಜೆ 6:30 ಯಿಂದ 7:00 ರವರೆಗೆ ಪ್ರಾರ್ಥಿಸುವ ಮುಖಾಂತರ
ದೇವರ ಸಾನ್ನಿಧ್ಯವನ್ನು ಮತ್ತು ಹಿಂದೂ ಸಮುದಾಯವನ್ನು ಗೌರವಿಸುವುದೇ
ಈ ಪ್ರಾರ್ಥನೆ ಕಡೆಗೆ…
ಪ್ರಾರ್ಥನೆ ಮಾಡುವ ವಿಧಾನ
ಮೂರು ಬಾರಿ "ಓಂ" ಕಾರವನ್ನು ಹೇಳಿ ಮೇಲೆ ನೀಡಿರುವ ಪ್ರತಿ ಮಂತ್ರವನ್ನು
21 ಬಾರಿ ಜಪಿಸುವುದು ನಂತರ ಮತ್ತೆ
ಮೂರು ಬಾರಿ "ಓಂ" ಕಾರವನ್ನು ಹೇಳಿ ನಮಸ್ಕರಿಸುವುದು.
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂದರೆ 'ಶಿವನ ಆರಾಧನೆ' ಅಥವಾ 'ನಾನು ಶಿವನಿಗೆ ನಮಸ್ಕರಿಸುತ್ತೇನೆ'.
ಶಿವನನ್ನು ಪರಮ ಸತ್ಯ, ಆಂತರಿಕ ಆತ್ಮ ಅಥವಾ ಪರಮಾತ್ಮ ಎಂದು ಪೂಜಿಸಲಾಗುತ್ತದೆ.
ಓಂ ನಮಃ ಶಿವಾಯ ಜಪಿಸುವುದರಿಂದ ನಿಮ್ಮನ್ನು ಅಲೌಕಿಕ ಸ್ಥಿತಿಗೆ ಕೊಂಡೊಯ್ಯುತ್ತದೆ. ವಿವಿಧ ತೊಂದರೆಗಳು ಮತ್ತು ಕೆಟ್ಟ ಜೀವನ ಪರಿಸರಗಳಲ್ಲಿ ಸಂಗ್ರಹವಾದ ನಿಮ್ಮ ವಿಷಕಾರಿ ಭಾವನೆಗಳು ಮತ್ತು ಆಲೋಚನೆಗಳನ್ನು ಇದು ಗುಣಪಡಿಸುತ್ತದೆ. ನಿಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ. ಮತ್ತು ನೀವು ನಿಧಾನವಾಗಿ ನಿಮ್ಮ ಸ್ವಂತ ಆತ್ಮದ ಅಗಾಧ ಸಾಧ್ಯತೆಯನ್ನು ಅರಿತುಕೊಳ್ಳಲು ಪ್ರಾರಂಭಿಸುವ ದಾರಿಯೇ ಮಾಡುತ್ತದೆ.
ಓಂ ಶ್ರೀ ಕಾಲಭೈರವಾಯ ನಮಃ
ಓಂ ಶ್ರೀ ಕಾಲಭೈರವಾಯ ನಮಃ ಎಂದರೆ 'ನಾನು ಕಾಲಭೈವರನಿಗೆ ನಮಸ್ಕರಿಸುತ್ತೇನೆ'.
ಕಾಲ ಎಂದರೆ ಸಮಯ ಮತ್ತು ಭೈರವ ಎಂದರೆ ರಕ್ಷಕ. ನಮ್ಮನ್ನು ಎಲ್ಲಾ ಸಮಯದಲ್ಲೂ ರಕ್ಷಣೆ ಮಾಡುವ ಪರಮಾತ್ಮ ಎಂದು ಪೂಜಿಸಲಾಗುತ್ತದೆ.
ಓಂ ಶ್ರೀ ಕಾಲಭೈರವಾಯ ನಮಃ ಜಪಿಸುವುದರಿಂದ ನಿಮ್ಮ ಕೆಟ್ಟ ಕರ್ಮಗಳು, ಸಾವಿನ ಭಯ ನಿವಾರಣೆಯಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ, ಸಮೃದ್ಧಿ ಸಿಗುತ್ತದೆ, ಲೌಕಿಕ ಸೌಕರ್ಯಗಳು ಸಿಗುವುದು ಮತ್ತು ತೃಪ್ತಿಕರ ಮತ್ತು ಆನಂದದಾಯಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಹಾಗೂ ಕೆಟ್ಟ ಗ್ರಹದ ದುಷ್ಪರಿಣಾಮಗಳಿಂದ ಪರಿಹಾರ ಸಿಗುತ್ತದೆ.
ಆತ್ಮೀಯರೇ,
ಹಿಂದೂಗಳಾದ ನಾವು ಪ್ರತಿ ಸೋಮವಾರ ನಮ್ಮ ಹತ್ತಿರವಿರುವ ದೇವಸ್ಥಾನ, ನಾವು ಕೆಲಸ ನಿರ್ವಹಿಸುತ್ತಿರುವ ಅಂಗಡಿ, ಕಛೇರಿ ಅಥವಾ ನಮ್ಮ ನಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಯಾವುದೇ ಕೆಲಸ ಕಾರ್ಯವಿದ್ದರು ಅದನ್ನು ಬದಿಗೆ ಇಟ್ಟು ಆ ಸಮಯದಲ್ಲಿ ಪ್ರಾರ್ಥನೆ ಮಾಡುವುದನ್ನು ರೂಢಿಸಿಕೊಳ್ಳೋಣ.
ನಮ್ಮ ಪ್ರೀತಿಯ ಹಿಂದೂ ಸಮುದಾಯದ ಜನರೇ ಇವತ್ತಿನಿಂದ ಒಂದು ಸಂಕಲ್ಪವನ್ನು ಮಾಡೋಣ ಬನ್ನಿ, ನಾವೆಲ್ಲರೂ ತಪ್ಪದೇ ಪ್ರತಿ ಸೋಮವಾರ ಪ್ರಾರ್ಥನೆ ಮಾಡುತ್ತೇವೆ ಎಂದು....
ಈ ಪ್ರಾರ್ಥನೆ ನಮಗಾಗಿ ಮಾತ್ರವಲ್ಲದೇ ನಮ್ಮ ಮುಂದಿನ ಪೀಳಿಗೆಗೆ ಮತ್ತು ಸಮುದಾಯದ ಸುರಕ್ಷತೆಗಾಗಿ.
ನಮ್ಮ ಶ್ರೀ ಕಾಲಭೈರವ ಬಳಗ ಟ್ರಸ್ಟ್ ವತಿಯಿಂದ ಹಿಂದೂ ಸಮಾಜದಲ್ಲಿ ನವಶಕ್ತಿಯನ್ನು ನಿರ್ಮಿಸಿ, “ಪ್ರಾರ್ಥನೆ ಕಡೆಗೆ” ಎಂಬ ಹೊಸ ಇತಿಹಾಸವನ್ನು ಬರೆಯಲು ಪ್ರಯತ್ನ ಮಾಡುತ್ತಿದ್ದೇವೆ, ಈ ಮಹತ್ ಕಾರ್ಯದಲ್ಲಿ ನೀವೆಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇನೆ.
ಕಿಶೋರ್ ಗುರೂಜಿ
ಸಂಸ್ಥಾಪಕರು
ಶ್ರೀ ಕಾಲಭೈರವ ಬಳಗ ಟ್ರಸ್ಟ್, ಮೈಸೂರು