Loading image...
ಶ್ರೀ ಕಾಲಭೈರವ ಸ್ವಾಮಿ ಪಂಚಲೋಹ ಮೂರ್ತಿಯ ಪ್ರಾಣಪ್ರತಿಷ್ಠಾಪನೆ
ಈ ಕಾರ್ಯಕ್ರಮದ ಬಗ್ಗೆ
ಶ್ರೀ ಕಾಲಭೈರವ ಬಳಗ ಟ್ರಸ್ಟ್ ಉದ್ಘಾಟನಾ ಸಮಾರಂಭವನ್ನು ಜನವರಿ 24, 2025 ರಂದು ನಡೆಸಲಾಯಿತು. ಶ್ರೀ ಕಾಲಭೈರವ ಬಳಗ ಟ್ರಸ್ಟ್ ನ ವತಿಯಿಂದ ಶ್ರೀ ಕಾಲಭೈರವ ಸ್ವಾಮಿ ಉತ್ಸವ ಮೂರ್ತಿ (ಪಂಚಲೋಹ ಮೂರ್ತಿ)ಯ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮ ಹಾಗೂ ಟ್ರಸ್ಟ್ ಉದ್ಘಾಟನಾ ಸಮಾರಂಭವನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಯತೀಶ್ ಬಾಬುರವರ ಸ್ವಂತ ಸ್ಥಳದಲ್ಲಿ ನಡೆಸಲಾಯಿತು. ಈ ಸಮಾರಂಭವನ್ನು ಶ್ರೀಮತಿ ಜಲಜಾಕ್ಷಿ ಮತ್ತು ಶ್ರೀ ಎಸ್ ಪಿ ಸಂಗಮೇಶ್ವರವರು ಮತ್ತು ಶ್ರೀಯುತ ಅರುಣ್ ಎಲ್ ರವರು ಪೊಲೀಸ್ ಇನ್ಸ್ಪೆಕ್ಟರ್ ಕುವೆಂಪುನಗರ ಪೊಲೀಸ್ ಠಾಣೆ ಹಾಗೂ ಶ್ರೀ ಕಾಲಭೈರವ ಬಳಗ ಟ್ರಸ್ಟ್ ನ ಸಂಸ್ಥಾಪಕರಾದ ಕಿಶೋರ್ ಗುರೂಜಿ ರವರು ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹ ಸಂಸ್ಥಾಪಕರಾದ ಸಾಗರ್ ಗುರೂಜಿ , ಶ್ರೀ ಯತೀಶ್ ಬಾಬು ಪಿಎನ್ ಅಧ್ಯಕ್ಷರು, ಶ್ರೀ ಅಯ್ಯಪ್ಪನ್ ಉಪಾಧ್ಯಕ್ಷರು, ಶ್ರೀ ರಮೇಶ್ ಎನ್ ಕಾರ್ಯದರ್ಶಿಗಳು, ಬೆೋರಯ್ಯ ಖಜಾಂಚಿಗಳು ಮತ್ತು ಎಲ್ಲಾ ಟ್ರಸ್ಟಿಗಳು ಉಪಸ್ಥಿತರಿದ್ದರು. ಕೆ ಹರೀಶ್ ಗೌಡರು, ಶಾಸಕರು ಚಾಮರಾಜ ವಿಧಾನಸಭಾ ಕ್ಷೇತ್ರ, ಮೈಸೂರು ಇವರು ಮಹಾಪೂರ್ಣಾಹುತಿಯಲ್ಲಿ ಭಾಗವಹಿಸಿ ಶ್ರೀ ಕಾಲಭೈರವ ಸ್ವಾಮಿಯ ಅನುಗ್ರಹ ಪಡೆದರು. ಈ ಮಹೋತ್ಸವದಲ್ಲಿ ಶ್ರೀ ಕಾಲಭೈರವ ಬಳಗದ ಸದಸ್ಯರಗಳು ಹಾಗೂ ಸ್ವಾಮಿಯ ಭಕ್ತರು ಭಾಗವಹಿಸಿ ಶ್ರೀ ಸ್ವಾಮಿಯ ಕೃಪಾಶೀರ್ವಾದವನ್ನು ಪಡೆದುಕೊಂಡರು.
ಕಾರ್ಯಕ್ರಮದ ಗ್ಯಾಲರಿ
Loading image...
Loading image...
Loading image...
Loading image...