Loading image...
ಮಂಡಲ ಪೂಜಾ ಮಹೋತ್ಸವ
ಈ ಕಾರ್ಯಕ್ರಮದ ಬಗ್ಗೆ
ಶ್ರೀ ಕಾಲಭೈರವ ಸ್ವಾಮಿಯ ಮಂಡಲ ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ಮಾರ್ಚ್ 14, 2025 ರಂದು ನಡೆಸಲಾಯಿತು. ಶ್ರೀ ಕಾಲಭೈರವ ಬಳಗ ಟ್ರಸ್ಟ್ ನ ವತಿಯಿಂದ ಶ್ರೀ ಕಾಲಭೈರವ ಸ್ವಾಮಿ ಉತ್ಸವ ಮೂರ್ತಿ (ಪಂಚಲೋಹ ಮೂರ್ತಿ)ಯ ಮಂಡಲ ಪೂಜೆ ಹಾಗೂ ವಿಶೇಷವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಯತೀಶ್ ಬಾಬುರವರ ಸ್ವಂತ ಸ್ಥಳದಲ್ಲಿ ನಡೆಸಲಾಯಿತು. ಈ ಸಮಾರಂಭದಲ್ಲಿ ಶ್ರೀ ಎಸ್ ಪಿ ಸಂಗಮೇಶ್ವರವರು, ಶ್ರೀಯುತ ಅರುಣ್ ಎಲ್ ರವರು ಪೊಲೀಸ್ ಇನ್ಸ್ಪೆಕ್ಟರ್, ಕುವೆಂಪುನಗರ ಪೊಲೀಸ್ ಠಾಣೆ, ಶ್ರೀಯುತ ದಿವಾಕರ್ ರವರು ಪೊಲೀಸ್ ಇನ್ಸ್ಪೆಕ್ಟರ್, ಮೆಟಗಳ್ಳಿ ಪೊಲೀಸ್ ಠಾಣೆ ಹಾಗೂ ಶ್ರೀ ಕಾಲಭೈರವ ಬಳಗ ಟ್ರಸ್ಟ್ ನ ಸಂಸ್ಥಾಪಕರಾದ ಕಿಶೋರ್ ಗುರೂಜಿ ರವರು ಟ್ರಸ್ಟಿನ ವೆಬ್ ಸೈಟ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹ ಸಂಸ್ಥಾಪಕರಾದ ಸಾಗರ್ ಗುರೂಜಿ , ಶ್ರೀ ಯತೀಶ್ ಬಾಬು ಪಿಎನ್ ಅಧ್ಯಕ್ಷರು, ಶ್ರೀ ಅಯ್ಯಪ್ಪನ್ ಉಪಾಧ್ಯಕ್ಷರು, ಶ್ರೀ ರಮೇಶ್ ಎನ್ ಕಾರ್ಯದರ್ಶಿಗಳು, ಬೆೋರಯ್ಯ ಖಜಾಂಚಿಗಳು ಮತ್ತು ಎಲ್ಲಾ ಟ್ರಸ್ಟಿಗಳು ಉಪಸ್ಥಿತರಿದ್ದರು. ಟ್ರಸ್ಟಿನ ವೆಬ್ಸೈಟ್ ಡಿಸೈನ್ ಅಂಡ್ ಡೆವಲೆಪ್ ಮಾಡಿದರು ಅರ್ಜುನ್, ತನುಶ್ರೀ, ರಕ್ಷಿತ್, ರಂಜಿತ್ ಮತ್ತು ಮಧು. ಈ ಮಹೋತ್ಸವದಲ್ಲಿ ಶ್ರೀ ಕಾಲಭೈರವ ಬಳಗದ ಸದಸ್ಯರಗಳು ಹಾಗೂ ಸ್ವಾಮಿಯ ಭಕ್ತರು ಭಾಗವಹಿಸಿ ಶ್ರೀ ಸ್ವಾಮಿಯ ಕೃಪಾಶೀರ್ವಾದವನ್ನು ಪಡೆದುಕೊಂಡರು.
ಕಾರ್ಯಕ್ರಮದ ಗ್ಯಾಲರಿ
Loading image...