Om Symbol
ಕಾರ್ಯಕ್ರಮಗಳಿಗೆ ಹಿಂತಿರುಗಿ

Loading image...

ಚಾಮುಂಡಿಬೆಟ್ಟಕ್ಕೆ ಪಾದಯಾತ್ರೆ

March 14, 2025
6:00 AM - 9:00 AM
ಚಾಮುಂಡಿಬೆಟ್ಟ, ಮೈಸೂರು

ಈ ಕಾರ್ಯಕ್ರಮದ ಬಗ್ಗೆ

ಶ್ರೀ ಕಾಲಭೈರವ ಸ್ವಾಮಿಯ ಹಾಗೂ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯ ಕೃಪಾಶೀರ್ವಾದದೊಂದಿಗೆ ದಿನಾಂಕ 19ನೇ ಮಾರ್ಚ್ 2025ರ ಬುಧವಾರದಂದು ಶ್ರೀ ಕಾಲಭೈರವ ಬಳಗ ಟ್ರಸ್ಟ್ ವತಿಯಿಂದ ನಮ್ಮ ನಡಿಗೆ ಆರೋಗ್ಯ ದೆಡೆಗೆ ಎಂಬ ಸಂಕಲ್ಪದೊಂದಿಗೆ ಚಾಮುಂಡಿಬೆಟ್ಟಕ್ಕೆ ಪಾದಯಾತ್ರೆ! ಮಾಡಲಾಯಿತು. ದೇವಿಯ ದರ್ಶನ ಪಡೆದ ನಂತರ ಬೆಟ್ಟದ ಮೇಲೆ ಇರುವ ಶ್ರೀ ಕಾಲಭೈರವ ಸ್ವಾಮಿಯ ದರ್ಶನ ಮಾಡಲಾಯಿತು.

ನಮ್ಮ ನಡಿಗೆ ಆರೋಗ್ಯ ದೆಡೆಗೆ

ನಡಿಗೆ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ. ಅದು ಕೇವಲ ಚಲನೆಯ ರೀತಿಯಷ್ಟೇ ಅಲ್ಲ, ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಅಭ್ಯಾಸವೂ ಹೌದು.

ನಡಿಗೆಯ ಮಹತ್ವ * ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ * ದೇಹದಲ್ಲಿ ತುಂಬಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ * ದೇಹದ ತೂಕವನ್ನು ಸಮತೋಲನದಲ್ಲಿರಿಸುತ್ತದೆ * ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ * ತಂತ್ರಿಕ ಮತ್ತು ಸ್ನಾಯುವಿಧಾನದ ಆರೋಗ್ಯವನ್ನು ಬೆಂಬಲಿಸುತ್ತದೆ

ಪ್ರತಿದಿನವೂ ನಿರಂತರವಾಗಿ ನಡೆಯುವುದರಿಂದ ಆರೋಗ್ಯ ಮತ್ತು ಸಂತೋಷ ಎರಡೂ ನಿಮ್ಮದಾಗುತ್ತವೆ! ಪ್ರತಿದಿನವೂ ನಾವು ಸ್ವಲ್ಪ ದೂರವಾದರು ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳೋಣ ಬನ್ನಿ!

ಜೈ ಕಾಲಭೈರವ!

ಈ ಪಾದಯಾತ್ರೆಯಲ್ಲಿ ಶ್ರೀ ಎಸ್ ಪಿ ಸಂಗಮೇಶ್ವರವರು, ಶ್ರೀ ಕಾಲಭೈರವ ಬಳಗ ಟ್ರಸ್ಟ್ ನ ಸಂಸ್ಥಾಪಕರಾದ ಕಿಶೋರ್ ಗುರೂಜಿ, ಸಹ ಸಂಸ್ಥಾಪಕರಾದ ಸಾಗರ್ ಗುರೂಜಿ , ಶ್ರೀ ಯತೀಶ್ ಬಾಬು ಪಿಎನ್ ಅಧ್ಯಕ್ಷರು, ಶ್ರೀ ಅಯ್ಯಪ್ಪನ್ ಉಪಾಧ್ಯಕ್ಷರು, ಶ್ರೀ ರಮೇಶ್ ಎನ್ ಕಾರ್ಯದರ್ಶಿಗಳು, ಬೆೋರಯ್ಯ ಖಜಾಂಚಿಗಳು ಮತ್ತು ಎಲ್ಲಾ ಟ್ರಸ್ಟಿಗಳು ಉಪಸ್ಥಿತರಿದ್ದರು.

ಈ ಪಾದಯಾತ್ರೆಯಲ್ಲಿ ಭಾಗವಹಿಸದ ಶ್ರೀ ಕಾಲಭೈರವ ಬಳಗದ ಸದಸ್ಯರಗಳು ಹಾಗೂ ಸ್ವಾಮಿಯ ಭಕ್ತರಿಗೆ ಶ್ರೀ ಕಾಲಭೈರವ ಸ್ವಾಮಿಯ ಹಾಗೂ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಪರಿಪೂರ್ಣ ಕೃಪಾಕಟಾಕ್ಷ ಸದಾ ಇರಲಿ ಎಂದು ಪ್ರಾರ್ಥಿಸುತ್ತೇವೆ.

ಕಾರ್ಯಕ್ರಮದ ಗ್ಯಾಲರಿ

Loading image...

Loading image...

Loading image...

Loading image...

Loading image...

Loading image...

ಕಾರ್ಯಕ್ರಮದ ವಿವರಗಳು

  • ದಿನಾಂಕMarch 14, 2025
  • ಸಮಯ6:00 AM - 9:00 AM
  • ಸ್ಥಳಚಾಮುಂಡಿಬೆಟ್ಟ, ಮೈಸೂರು

ಹೆಚ್ಚಿನ ಮಾಹಿತಿ ಬೇಕೇ?

ಈ ಕಾರ್ಯಕ್ರಮದ ಬಗ್ಗೆ ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.